ಚೆಳ್ಳಗುರ್ಕಿ ಶ್ರೀ ಎರ್ರಿತಾತ


" ಚೆಳ್ಳಗುರ್ಕಿ "


    ಬಿಸಿಲನಾಡು ಬಳ್ಳಾರಿ ತಾಲ್ಲೂಕಿನ  ಆಂಧ್ರ ಗಡಿಭಾಗಕ್ಕೆ ಹೊಂದಿಕೊಂಡ ಗ್ರಾಮ .ಇದು  ಮಹಾಮಹಿಮ " ಶ್ರೀ ಎರ್ರಿತಾತ " ನವರ  ತಪೋಭೂಮಿ .ಅನೇಕ ಪವಾಡಗಳನ್ನು  ಸೃಜಿಸಿ  ನೊಂದವರ  ಪಾಲಿಗೆ  ನಡೆದಾಡುವ  ದೇವರಾಗಿ  ಅವರ  ಕಷ್ಟಗಳನ್ನು  ನಿವಾರಿಸಿದ  ಮಹಾಯೋಗಿ .ಇವರು ಕಾಲವಾದ ನಂತರ .ಸುದ್ಧಿ ತಿಳಿದ ಭಕ್ತರು  ಅಂತಿಮ ದರ್ಶನಕ್ಕೆ  ಮೂರು ದಿನಗಳ ಕಾಲ  ಇರಿಸಿಕೊಂಡು  ಅಹೋರಾತ್ರಿ  ಭಜನೆ ,ಪೂಜೆ ಮುಂತಾದ  ಧಾರ್ಮಿಕ  ವಿಧಾನಗಳಿಂದ  ಪೂಜಿಸಿ ,ಭಾರೀ  ಭಕ್ತ ಸಮೂಹದೊಂದಿಗೆ ಭಾರವಾದ ಹೃದಯ ದೊಂದಿಗೆ ತಾತ ನವರ  ಸಮಾಧಿ  ಮಾಡಲಾಯಿತು ,ಕೆಲಕಾಲದ  ನಂತರ  ಆ ಸಮಾಧಿಯ  ಮೇಲೆ  ಭವ್ಯವಾದ  ಗದ್ದುಗೆಯನ್ನು  ನಿರ್ಮಸಿ  ,ಬರುವ ಭಕ್ತರಿಗೆ  ತಾತನವರ  ಗದ್ದುಗೆಯ ದರ್ಶಿಸಲು  ಅನುಕೂಲ ಮಾಡಿಕೊಡಲಾಯಿತು .ಹಾಗೆ ,ಅದೊಂದುದಿನ  ಭಕ್ತ ಬಳಗವೆಲ್ಲ  ಸೇರಿ ,ಆ ಸ್ಥಳದಲ್ಲಿ  " ಶ್ರೀ ಯಾರ್ರಿತಾತನವರ ಸಮಾಧಿ ಸ್ಥಳ " ಎಂದು  ಫಲಕವನ್ನು  ಬರೆಸಲು  ತೀರ್ಮಾನಿಸಿದಾಗ ,ಆ ಸಮಾಧಿ  ಸ್ಥಳದಿಂದ  ಏನೋ  ಶಬ್ದ ಬಂದಂತಾಗಿ  ಎಲ್ಲರೂ  ಅಲ್ಲಿಗೆ ಹೋದಾಗ ಆಗ ನಡಿಯಿತು ಒಂದು ಪವಾಡ ....

   " ನಾನೇನೋ ಯೋಗನಿದ್ರೆಯಲ್ಲಿ  ಧ್ಯಾನಸ್ಥ ನಾಗಿದ್ದಾಗ  ಸತ್ತೀನಂತ  ಸಮಾಧಿ ಮಾಡಿಬಿಟ್ರಲ್ಲೋ  ಹುಚ್ಚು ನನ್ಮಕ್ಕಳಾ ,ಸಮಾಧಿ ಸ್ಥಳ  ಅಂತ ಬರಸೋ ಬದಲು " ಸಜೀವ ಸಮಾಧಿ " ಅಂತ ಬರಿಸಿ ಅಂತ ತಾತನವರು ಹೇಳಿದಾಕ್ಷಣ  ಇಡೀ ಜನಸ್ತೋಮ  ದಿಗ್ಭ್ರಮೆ  ಗೊಂಡರು ....

   ಅದಕ್ಕೆ ಹೇಳುವುದು  ಶರಣರ ಸಮಾಧಿ ಸ್ಥಳಗಳನ್ನು " ಜಾಗೃತ ಸ್ಥಾನಗಳೆಂದು  ಕರೆಯುತ್ತಾರೆ .ಅವರು ಕಾಲವಾದ  ಸಾವಿರಾರು  ವರ್ಷಗಳ ನಂತರವೂ   ಭಕ್ತರನ್ನು  ಪೊರೆವ  ಕಲ್ಪತರು ಗಳಾಗಿ ಇರುತ್ತಾರೆ .

-ಯಾಡ್ಕಿ ಬಸವರಾಜ, ಕುರುಗೋಡು

Comments

Popular posts from this blog

ದಮ್ಮೂರು ವೆಂಕಪ್ಪತಾತ

ಹಂಪೆ ಚಕ್ರತೀರ್ಥ