ಹಂಪೆ ಚಕ್ರತೀರ್ಥ

ಕಾಲ : ೧೫ನೇ  ಶತಮಾನ
   ಸ್ಥಳ  :  ವಿಜಯನಗರ  ಸಾಮ್ರಾಜ್ಯದ  ರಾಜಧಾನಿ   ಹಂಪೆ  ಚಕ್ರತೀರ್ಥದ  ಹತ್ತಿರದ  ಯಂತ್ರೋ ಧಾರಕ  ಆಂಜನೇಯ  ದೇವರ  ಸನ್ನಿಧಾನ .
  ಸಮಯ : ಪ್ರಾಥಹ ಕಾಲ .

 ಶ್ರೀ ವ್ಯಾಸರಾಜರು , ಪುರಂಧರದಾಸರು ,ಕನಕದಾಸರು ಕೂಡಿದ  ಸಮಯ ಆಗವ್ಯಾಸರಾಜರು ,ಕನಕದಾಸರನ್ನು  ಉದ್ದೇಶಿಸಿ ,ಕನಕಾ ,ಪ್ರಾಣದೇವರ ಪೂಜೆಗೆ  ಹೂಗಳನ್ನು  ಕೊಯ್ದು ತಾ ,ಎಂದು ಆದೇಶಿಸಿದಾಗ ಕನಕದಾಸರು  ಅಲ್ಲಿಂದ ಹೊರಟು  ತುಂಗಾ ತೀರದ ದಡದಲ್ಲಿ  ಹೂಗಳನ್ನು  ಆಯ್ದು ತಂದು  ಗುರುಗಳ  ಮುಂದೆ ಇಟ್ಟು  ಕುಳಿತರು .ಕ್ಷಣಕಾಲ  ಹೂಗಳನ್ನು  ದಿಟ್ಟಿಸಿದ  ವ್ಯಾಸರಾಜರು  ,ಈ ಹೂಗಳು ಆಗಲೇ  ಬೇರೆ ದೇವರಿಗೆ  ಅರ್ಪಿತವಾಗಿವೆ  ಹಾಗಾಗಿ  ಬೇರೆ ಹೂಗಳನ್ನು  ತೆಗೆದುಕೊಂಡು  ಬಾ ಎಂದು ಹೇಳಿದರು ,ಆಗ ಮರುಮಾತಾಡದೆ  ಕನಕದಾಸರು  ಮತ್ತೆ ಹೊರಟು  ಬೇರೆ ಹೂಗಳನ್ನು  ತಂದು  ಗುರುಗಳ ಮುಂದೆ  ಇರಿಸಿದರು .ಆಗ ,ಮತ್ತೇ ಹೂಗಳನ್ನು  ದಿಟ್ಟಿಸಿ ದ ವ್ಯಾಸರಾಯರು  ಇವು  ಕೂಡ  ಬೇರೇ ದೇವರಿಗೆ  ಅರ್ಪಿ ಸಲ್ಪಟ್ಟಿವೆ  ಎಂದರು .

ಈ ಮಾತು ಕೇಳಿ  ಕನಕದಾಸರು  ಚಕಿತರಾಗಿ ,ಗುರುಗಳೇ ,ಈ ಮೊದಲು  ತಂದ  ಹೂಗಳು  ಗಿಡಗಳ ಕೆಳಗೆ ಬಿದ್ದ  ಹೂಗಳು ಬಹುಶಃ  ಅವು  ಬೇರೆ ದೇವರಿಗೆ  ಆರ್ಪಿತ ವಾಗಿರ ಬಹುದು ,ಆದರೆ ,ಈಗ ತಂದ ಹೂಗಳು  ಈಗತಾನೇ  ಗಿಡದಲ್ಲಿ  ಅರಳಿದ  ತಾಜಾ  ಹೂಗಳು  ಅದು ಹೇಗೆ  ದೇವರಿಗೆ  ಅರ್ಪಿಸಲು ಸಾದ್ಯ ? ಬಿಡಿಸಿ ಹೇಳಿ ಎಂದು ಕೇಳಿದರು .ಪುರಂದರ ದಾಸರು ಕೂಡ ಆಶ್ಚರ್ಯ ದಿಂದ ಗುರುಗಳ  ಕಡೆ ನೋಡಿ  ಕನಕರ ಮಾತಿಗೆ ಗುರುಗಳು  ಏನು  ಹೇಳುವರೆಂದು  ಕುತೂಹಲದಿಂದ  ಕಾದರು ..ಆಗ ವ್ಯಾಸರಾಯರು   ಮಂದಹಾಸ  ಬೀರುತ್ತಾ   ಒಂದು ಕ್ಷಣ  ಕಣ್ಣು ಮುಚ್ಚಿ ಕುಳಿತರು .ಅದೇ  ಸಮಯಕ್ಕೆ  ಒಬ್ಬ  ಮಹಾನುಭಾವರ  ಪ್ರವೇಶ  ವಾಯಿತು .( ಅವರ ಹೆಸರು  ನೆನಪಿಲ್ಲ ) ಬಂದವರೇ  ವ್ಯಾಸರಾಯರಿಗೆ  ನಮಸ್ಕರಿಸಿ ,ಗುರುಗಳ ಕುಶಲವನ್ನು  ವಿಚಾರಿಸಿ  ,ತಮ್ಮ ದರುಶನಕ್ಕಾಗಿ  ಓಡೋಡಿ  ಬಂದೆನೆಂದು  ತಿಳಿಸಿದರು .

ಗುರುಗಳು ಅವರನ್ನು ಆದರಿಸಿ ಇಲ್ಲಿಗೆ ಬಂದ ಬಗೆಯನ್ನು  ತಿಳಿಸಿ ಎಂದು ಕೇಳಿದಾಗ ,ಆಗ ಅವರು ,ನೀವು  ಇಲ್ಲಿ  ಇರುವ  ವಿಶಯ  ತಿಳಿಯಿತು  ಹಾಗೆ  ತುಂಗೆಯಲ್ಲಿ  ಸ್ನಾನಾದಿ ಗಳನ್ನು ಮುಗಿಸಿ ,ನಿಮ್ಮನ್ನ  ಕಾಣುವ  ಉದ್ದೇಶ ದಿಂದ  ವಿರೂಪಾಕ್ಷ  ದೇವರ ದರ್ಶನಕ್ಕೆ  ಹೋದರೆ  ತಡವಾಗುವುದೆಂದು ,ಚಕ್ರ ತೀರ್ಥದ  ಹತ್ತಿರ ಸ್ನಾನ ಮುಗಿಸಿ ,ಅಲ್ಲಿಂದಲೇ  ವಿರೂಪಾಕ್ಷನಿಗೆ  ನಮಸ್ಕರಿಸಿ 
 " ಹಂಪಿಯಲ್ಲಿ  ಅರಳಿದ ಹೂಗಳೆಲ್ಲವೂ  ವಿರೂಪಾಕ್ಷನಿಗೆ  ಅರ್ಪಣೆಯಾಗಲಿ " ತುಂಗೆಯ ನೀರಿನಿಂದ  ಪ್ರೋಕ್ಷಣೆ  ಮಾಡಿ  ನಿಮ್ಮಲ್ಲಿಗೆ  ಬಂದೆ  ಎಂದು ಹೇಳಿದಾಗ ,,ಕನಕದಾಸರಿಗೆ ,ಪುರಂದರ ದಾಸರಿಗೆ  ಮೈಯಲ್ಲ  ಕಂಪಿಸಿದಂತಾಗಿ  ,ಅಲ್ಲಿಗೆ ಆಗಮಿಸಿದ್ದ  ಮಾಹಾತ್ಮರ  ಭಕ್ತಿಯ  ಪರಾಕಾಷ್ಠೆಯ ಬಗ್ಗೆ ,ವ್ಯಾಸರಾಯರ  ದಿವ್ಯಜ್ಞಾನದ  ಬಗ್ಗೆ ಕಣ್ಣಾರೆ ಕಂಡ  ಈ ಘಟನೆಯ  ಬಗ್ಗೆ  ಆಲೋಚಿಸಲೂ  ಆಗದೆ ಮೂಕ ವಿಸ್ಮಿತರಾದರು .ಕೇವಲ  ನೀರಿನ ತರ್ಪಣೆ ಯಿಂದ  ಇಡೀ  ಹಂಪೆಯಲ್ಲಿನ  ಹೂಗಳನ್ನೆಲ್ಲ  ವಿರೂಪಾಕ್ಷ  ದೇವರಿಗೆ  ನಿಂತಲ್ಲೇ  ಅರ್ಪಿಸುವುದೆಂದರೇನು ? ದೇವರನ್ನು ಬಿಟ್ಟು  ವ್ಯಾಸರಾಯರನ್ನು  ಕಾಣಬಯಸುವುದೆಂದರೇನು ? ಇದೆಲ್ಲವನ್ನು  ಕುಳಿತಜಾಗದಿಂದಲೇ  ಗುರುಗಳು  ಗ್ರಹಿಸುವುದೆಂದರೇನು ?

 ಇಂಥಾ ಮಹಾನುಭಾವರು ನಡೆದಾಡಿದ  ಜಿಲ್ಲೆ ಯಲ್ಲಿ ,ನೆಲದಲ್ಲಿ  ಜನಿಸಿದ  ನಾವೇ ಧನ್ಯರು ಅಲ್ಲವೆ ?

-ಯಾಡ್ಕಿ ಬಸವರಾಜ , ಕುರುಗೋಡು

Comments

Popular posts from this blog

ದಮ್ಮೂರು ವೆಂಕಪ್ಪತಾತ

ಚೆಳ್ಳಗುರ್ಕಿ ಶ್ರೀ ಎರ್ರಿತಾತ