ದಮ್ಮೂರು ವೆಂಕಪ್ಪತಾತ
ಬಳ್ಳಾರಿ ಜಿಲ್ಲೆ ವಿಶೇಷವಾಗಿ ಬಳ್ಳಾರಿ ತಾಲೂಕು ಅನೇಕ ಶರಣರ ,ಅವಧೂತರ ನೆಲೆವೀಡು ,ದಮ್ಮೂರು ವೆಂಕಾವಧೂತರು .ಚೇಳ್ಳಗುರ್ಕಿ ಯರಿತಾತ ,ಅಲ್ಲೀಪುರ ಮಹದೇವತಾತ .ಎಮ್ಮಿಗನೂರು ಜೆಡಿತಾತ .ಸಿಂಧಿಗೇರಿ ಮಲ್ಲಪ್ಪತಾತ .ಕುರುಗೋಡು ನೀಲಮ್ಮ ಹೀಗೆ ಹಲವಾರು ..." ದಮ್ಮೂರು " ಬಳ್ಳಾರಿ ಸಿರುಗುಪ್ಪ ಹೆದ್ದಾರಿ ಕುರುಗೋಡು ಕ್ರಾಸ್ ಹತ್ತಿರದ ಚಿಕ್ಕ ಗ್ರಾಮ .ಈ ಊರಿನ ಹತ್ತಿರದ ಚಿಕ್ಕ ಗುಡ್ಡದ ಪ್ರದೇಶ ದಲ್ಲಿ ವೆಂಕಪ್ಪತಾತರ ಮಠ ಇದೆ .( ಸಮಾಧಿ ಸ್ಥಳ ) ಸ್ವತಃ ತಾತನವರೇ ಗುಹೆ ಯೊಂದನ್ನು ಗುರುತಿಸಿ ,ತಾನೆನಿಂತು ಕಟ್ಟಿಸಿ ಇಲ್ಲಿಯೇ ನನ್ನ ಸಮಾಧಿ ಮಾಡಿರಿಯೆಂದು ತನ್ನ ಭಕ್ತರಿಗೆ ತಿಳಿಸಿ ,ಸುತ್ತ ಮುತ್ತ ಊರುಗಳಲ್ಲಿ ಸಂಚರಿಸಿ ಜನರಿಂದ ಹಣವನ್ನು ಸಂಗ್ರಹಿಸಿ ಮಠ ನಿರ್ಮಿಸಿರುತ್ತಾರೆ .ಹಾಗೆ ,ಕುರುಗೋಡಿಗೂ ಬಂದಿದ್ದರು .ನಮ್ಮ ತಾತ ಅವ್ವ ಬಹುಶ ಅಯ್ಯನೂ ನೋಡಿರುತ್ತಾರೆ .೧೯೪೦ರ ಸಮಯ .ಬ್ರಿಟಿಷ ರ ಆಳ್ವಿಕೆ .ಬಳ್ಳಾರಿ ,ಮದ್ರಾಸ್ ಪ್ರಾಂತಕ್ಕೆ ಸೇರಿತ್ತು .
ಆ ಸಮಯದಲ್ಲಿ ಮೂರುವರ್ಷಗಳಿಂದ ಭೀಕರ ಬರಗಾಲ ,ಜನಕಂಗೆಟ್ಟಿದ್ದರು .ಅಂಥಾ ಸಮಯದ ಲ್ಲಿ
" ಯುಗಾದಿ ಹಬ್ಬ " ಬಂದಿರುತ್ತದೆ ಕಯ್ಯಲ್ಲಿ ದುಡ್ಡಿಲ್ಲದ ಜನ ಹಬ್ಬವೆಲ್ಲಿ ಮಾಡುತ್ತರೆ ? ಊರಿಗೆ ಊರೇ ಬಿಕೋ ಎನ್ನುತ್ತಿತ್ತು .ಆಗ ಊರಿನೊಳಗೆ ಬಂದ ವೆಂಕಪ್ಪತಾತ ನವರು ಜನರನ್ನ ವಿಚಾರಿಸಲಾಗಿ ಬರದ ಕಾರಣ ಹಣವಿಲ್ಲದಿರುವುದರಿಂದ ಹಬ್ಬ ಮಾಡಲು ಆಗುತ್ತಿಲ್ಲ ವೆಂದು ಹೇಳುತ್ತಾರೆ .ಆಗ ತಾತನವರು ಹಬ್ಬ ಇನ್ನು ಮೂರುದಿನ ದೂರವಿದೆ ಸಂಜೆ ಎಲ್ಲರೊ ಗುಡ್ಡದ ಹತ್ತಿರ ಬನ್ನಿ ನಿಮಗೆ ಹಣವನ್ನು ಕೊಡುತ್ತೇನೆ ಹಬ್ಬವನ್ನು ಸಂತೋಷದಿಂದ ಆಚರಿಸಿ ಎಂದು ಹೇಳಿಹೋಗುತ್ತಾರೆ .ಮೊದಲೇ ಸನ್ಯಾಸಿ ಈತನೇನು ಕೊಡುತ್ತಾನೆ ? ಎಂದು ಜನ ಸುಮ್ಮನಾದರು .ಆದರೆ ,ರಾತ್ರಿ ಎಲ್ಲಾ ಕಾದ ತಾತನವರು ಯಾರುಬಾರದಿದ್ದರಿಂದ ತನ್ನ ಅನುಯಾಯಿಗಳನ್ನು ಕರೆದು ಈಕೂಡಲೇ ಸುತ್ತಮುತ್ತ ಗ್ರಾಮಸ್ಥರು ಎಲ್ಲರೂ ಇಲ್ಲಿಗೆ ಬರಬೇಕು ನೀವು ಕರೆದುಕೊಂಡು ಬನ್ನಿ ಎಂದು ಆಗ್ರಹಿಸಿದರು .ಅದನ್ನು ಕೇಳಿ ಜನರೆಲ್ಲಾ ಅಲ್ಲಿಗೆ ಬಂದು ಸೇರಿದರು .ಅಚ್ಚರಿ ಎನೆಂದರೆ ಬಂದವರೆಲ್ಲರಿಗೂ ತಾತನವರು ಕೈ ತುಂಬಾ ಹಣ ನೀಡಿ ಹಬ್ಬವನ್ನ ಚನ್ನಾಗಿ ಮಾಡಿ ಎಂದು ಹೇಳಿ ಕಲಿಸಿದರು .ಈ ಸುದ್ದಿ ಎಲ್ಲಾ ಕಡೆ ಹರಡಿ ಬಾರದೆ ಇದ್ದವರೆಲ್ಲ ಬಂದು ತಾತನವರಿಂದ ಹಣ ಪಡೆದು ಸಂತೋಷದಿಂದ ಹಬ್ಬವನ್ನ ಆಚರಿಸಿ ತಾತನವರ ಪವಾಡಕ್ಕೆ ಅಚ್ಚರಿ ಪಟ್ಟರು.
ಕೆಲವು ದಿನಗಳನಂತರ ..ಈ ವಿಷಯ ಬಳ್ಳಾರಿ ಕಲೆಕ್ಟರ್ ಆದ ಬ್ರಿಟಿಷ್ ಅಧಿಕಾರಿಗೆ ತಿಳಿಯುತ್ತದೆ .ಕೂಡಲೆ ಆ ಅಧಿಕಾರಿ ಪೊಲೀಸ್ ಪಡೆಯೊಂದಿಗೆ ವಿಚಾರಣೆಗೆ ದಮ್ಮೂರಿಗೇ ಆಗಮಿಸುತ್ತಾರೆ .ಅದು ಪೊಲಿಸ್ ಹೆಸರು ಕೇಳಿದರೆ ಬೆಚ್ಚಿ ಬೀಳುವಂತಾ ಕಾಲ .ಅಂಥದ್ದರಲ್ಲಿ ಕಲೆಕ್ಟರ ಮತ್ತು ಪೊಲಿಸ್ ಪಡೆ ಊರಿಗೆಬಂದಾಗ ಹೆದರಿದ ಜನ ಇದ್ದ ವಿಶಯವನ್ನು ತಿಳಿಸಿ ,ಹಣವನ್ನು ತಾತನವರೆ ಕೊಟ್ಟರೆಂದೂ ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲವೆಂದು ತಿಳಿಸುತ್ತಾರೆ .ಈಗ ಆ ತಾತ ಎಲ್ಲಿದ್ದಾನೆ ಎಂದು ಕೇಳಿದಾಗ ,ಜನರು ಊರ ಮುಂದಿನ ಗುಡ್ಡದ ಹತ್ತಿರ ಇರುತ್ತಾರೆ ಎಂದು ತಿಳಿಸುತ್ತಾರೆ .ಬಹುಶಃ ತಾತ ನೆಂಬ ವ್ಯಕ್ತಿ ಗುಡ್ಡ ದಲ್ಲೆಲ್ಲೋ ಕೋಟ ನೋಟು ತಯಾರಿಸುವ ಯಂತ್ರವನ್ನು ಇಟ್ಟಿಕೊಂಡು ಜನರಿಗೆ ಹಣವನ್ನು ಕೊಟ್ಟಿರಬಹುದೆಂದು ಊಹಿಸಿ .
ಈ ಕೂಡಲೆ ಅಲ್ಲಿಗೆ ಹೋಗಲು ಪೊಲೀಸರಿಗೆ ಸೂಚಿಸಿ ತಾವೂ ಜೀಪನ್ನೇರಿ ಹೊರಡುತ್ತಾರೆ .ಜನರೂ ಕೂಡ ಕುತೂಹಲದಿಂದ ಹಿಂಬಾಲಿಸುತ್ತಾರೆ .ಅಲ್ಲಿಗೆ ತಲುಪಿದ ನಂತರ ,ಒಂದು ಕಲ್ಲಿನ ಮೇಲೆ ಕುಳಿತಿದ್ದ ತಾತನವರನ್ನು ಕಂಡು ,ನೀವು ಇಲ್ಲಿಯೆ ಕುಳಿತಿರಬೇಕು ಎಲ್ಲಿಯೂ ಹೋಗಕೂಡದು ಎಂದು ಹೇಳಿ ,ಪೊಲೀಸರನ್ನು ಕರೆದು ,ಗುಡ್ಡದಲ್ಲೆಲ್ಲೋ ಬಚ್ಚಿಟ್ಟಿರಬಹುದ್ದಾದ ನೋಟು ಯಂತ್ರವನ್ನು ಹುಡುಕಲು ಆದೇಶಿಸುತ್ತಾರೆ .ಇಡೀ ಗುಡ್ಡವನ್ನು ಒಂದು ಚೂರೊ ಬಿಡದೆ ಶೋಧಿಸಿದರೂ ಏನೊಂದು ಸಿಗದೆ ಬರಿಗೈಲಿ ಬಂದ ಪೊಲೀಸರನ್ನು ಕಂಡು ಕೆರಳಿದ ಕಲೆಕ್ಟಾರ್ ಸಾಹೇಬ ತಾತನವರನ್ನು ಉದ್ದೇಶಿಸಿ ,ನೋಡಿ ,ಕೆಲದಿನಗಳ ಹಿಂದೆ ನೀನು ಈಊರಿನ ಜನರಿಗೆ ಭಾರಿ ಮೊತ್ತದ ಹಣವನ್ನು ನೀಡಿರುವೆ ಎಂದು ನಮಗೆ ಮಾಹಿತಿ ಬಂದಿದೆ ,ಅಷ್ಟೊಂದು ಹಣ ನಿನ್ನಹತ್ತಿರ ಇರಲು ಸಾಧ್ಯವಿಲ್ಲ ,ನೋಡಿದರೆ ಗೊತ್ತಾಗುತ್ತದೆ ನೀನೊಬ್ಬ ಭಿಕಾರಿ ಎಂದು ,ಅಷ್ಟೊಂದು ಹಣ ನಿನ್ನಲ್ಲಿ ಬಂದಿದೆ ಎಂದರೆ ನಿನ್ನಲ್ಲಿ ಖಂಡಿತವಾಗಿ ನೋಟು ತಯಾರಿಸುವ ಯಂತ್ರ ಇರಲೇ ಬೇಕು ,ತಕರಾರು ಮಾಡದೆ ನಮಗೆ ಒಪ್ಪಿಸಿದರೆ ನಿನಗೆ ಶಿಕ್ಷೆ ಕಡಿಮೆಯಾಗುತ್ತದೆ ,ಇಲ್ಲದಿದ್ದರೆ ನಿನ್ನನ್ನು ಬಂಧಿಸಿ ಸೆರೆಗೆ ತಳ್ಳಿ ಬಾಯಿ ಬಿಡಿಸ ಬೇಕಾಗುತ್ತದೆ ಎಚ್ಚರ ! ಎಂದು ಹೇಳುತ್ತಾನೆ .
ಅದನ್ನ ಕೇಳಿ ತಾತನವರು ,ತಪ್ಪ ಮಾಡಿದಿರೀ ಸಾಹೇಬ್ರ ,ನನ್ನ ಕೇಳಿದ್ರೆ ನಾನೆ ಹೇಳುತಿದ್ದೆ ,ಪಾಪ ಆ ಪೊಲೀಸರನ್ನ ಸುಮ್ಮನೆ ದಣಿಸಿಬಿಟ್ರಿ ,ಆ ಯಂತ್ರ ನನ್ನ ಹತ್ತಿರಾನೆ ಇದೆ ಸಾಹೇಬರ ,ಬೇರೆಯವರಿಗೆ ಕೊಟ್ಟರೆ ದುರುಪಯೋಗ ಮಾಡ್ತಾರಂತ ನಾನು ಯಾರಿಗೂ ಕೊಟ್ಟಿಲ್ಲ .ನಿಮಗ ಕೊಡ್ತೀನಿ .ಅಂದಾಗ ,ಪೊಲೀಸರೊಂದಿಗೆ ,ಕಲೆಕ್ಟಾರೊಂದಿಗೆ ಬಂದಿದ್ದಜನಕ್ಕೆ ಆಶ್ಚರ್ಯ ,ಭಯ ಒಟ್ಟಿಗೆ ಆಯಿತು ,ತಾತನವರು ಕೊಟ್ಟ ಹಣ ನಕಲಿ ಹಣವೇ ? ಆ ಹಣ ಪಡೆದ ನಮಗೂ ಶಿಕ್ಷೆ ಆಗುತ್ತದೆಯೇ ಎಂಬ ಭಯ ಒಂದು ಕಡೆ ,ತಾತನ ಹತ್ತಿರ ಇರುವ ನೋಟು ತಯಾರಿಸುವ ಯಂತ್ರ ನೋಡುವ ಕುತೂಹಲ ,ಎಲ್ಲರೂ ಕಣ್ಣು ಮಿಟುಕಿಸದೆ ನೋಡುತ್ತಿದ್ದರು .
ಆಗ ಕಲೆಕ್ಟಾರ್ ,ತೋರಿಸು ಅದನ್ನ ಎಂದಾಗ ,ಇದೇ ನೋಡ್ರಿ ಸಾಹೇಬರಾ ನಾನು ಕುಂತೀನಲ್ಲ ಇದೇ ಎಂದು ,ನಾಲ್ಕು ಮಡಿಪು ಮಡಿಚಿದ್ದ ಕರಿಯ ಕಂಬಳಿ ಯನ್ನ ತೋರಿಸಿದಾಗ ಇಡೀ ಜನಸ್ತೋಮ ಬೆಕ್ಕಸ ಬೆರಗಾದರೆ ,ಕಲೆಕ್ಟಾರಿಗೆ ಇದು ತಮಾಷೆ ಮಾಡುತ್ತಿದ್ದಾನೆ ಎಂದು ಅನ್ನಿಸಿ ,ಕೋಪದಿಂದ ಭುಸುಗುಡುತ್ತ ಕಣ್ಣು ಕೆಂಪಗೆ ಮಾಡಿಕೊಂಡು ತಾತನ ಮುಂದೆ ನುಗ್ಗುತ್ತಾನೆ ತಕ್ಷಣವೇ ತಾತನವರು ,ಕೋಪಿಸಿಕೊಳ್ಳಬೇಡಿ ಸಾಹೇಬರಾ ,ಇದೇ ಯಂತ್ರದಿಂದ ನಾನು ರೊಕ್ಕ ತಯಾರಿಸೋದು ಎಂದು ಹೇಳುತ್ತಾ ಕಂಬಳಿ ಯೊಳಕ್ಕೆ ಕೈ ಹಾಕಿ ಗರಿಗರಿ ನೋಟುಗಳನ್ನು ತೆಗೆಯ ತೊಡಗುತ್ತಾರೆ ...ಬನ್ನೀ ಸಾಹೇಬರ ನೀವೂ ತೆಗೀರಿ ಎಂದು ಹತ್ತಿರ ಬಂದಿದ್ದ ಕೆಲೆಕ್ಟಾ ರನ್ನ ಕರೆದಾಗ ,ಭಯದಿಂದಲೇ ಪದ್ಮಾಸನ ಹಾಕಿ ಕುಳಿತಿದ್ದ ತಾತನ ಕಾಲ ಬುಡದಲ್ಲಿದ್ದ ಕಂಬಳಿ ಯೊಳಗೆ ಕೈ ಹಾಕಿದಾಗ ಕೈ ತುಂಬಾ ನೋಟುಗಳ ಕಂತೆ ಹೊರಗೆ ಬರುತ್ತವೆ ,ಅದನ್ನ ಕಂಡ ಇಡೀ ಜನಸ್ತೋಮ ,ಪೊಲೀಸರೂ ,ಕಲೆಕ್ಟಾರೂ ಬೆರಗಾಗಿ ನಿಲ್ಲುತ್ತಾರೆ ,ಸ್ವಲ್ಪ ಸಮಯದ ನಂತರ ನೋಡಿದಾಗ ,ಕಂತೆ ಕಂತೆ ನೋಟುಗಳೆಲ್ಲ ಮಾಯವಾಗಿ ಕಂಬಳಿಯನ್ನು ಹೆಗಲಮೇಲೆ ಹಾಕಿಕೊಂಡು ನಗುನಗುತ್ತಾ ನಿಂತ ವೆಂಕಾವಧೂತರು ಮಾತ್ರ ಕಾಣುತ್ತಿದ್ದರು ...ದೂರದಲ್ಲಿ .....
- ಯಾಡ್ಕಿ ಬಸವರಾಜ , ಕುರುಗೋಡು
Comments
Post a Comment