Posts

Showing posts from 2018

ಚೆಳ್ಳಗುರ್ಕಿ ಶ್ರೀ ಎರ್ರಿತಾತ

" ಚೆಳ್ಳಗುರ್ಕಿ "     ಬಿಸಿಲನಾಡು ಬಳ್ಳಾರಿ ತಾಲ್ಲೂಕಿನ  ಆಂಧ್ರ ಗಡಿಭಾಗಕ್ಕೆ ಹೊಂದಿಕೊಂಡ ಗ್ರಾಮ .ಇದು  ಮಹಾಮಹಿಮ " ಶ್ರೀ ಎರ್ರಿತಾತ " ನವರ  ತಪೋಭೂಮಿ .ಅನೇಕ ಪವಾಡಗಳನ್ನು  ಸೃಜಿಸಿ  ನೊಂದವರ  ಪಾಲಿಗೆ  ನಡೆದಾಡುವ  ದೇವರಾಗಿ  ಅವರ  ಕಷ್ಟಗಳನ್ನು  ನಿವಾರಿಸಿದ  ಮಹಾಯೋಗಿ .ಇವರು ಕಾಲವಾದ ನಂತರ .ಸುದ್ಧಿ ತಿಳಿದ ಭಕ್ತರು  ಅಂತಿಮ ದರ್ಶನಕ್ಕೆ  ಮೂರು ದಿನಗಳ ಕಾಲ  ಇರಿಸಿಕೊಂಡು  ಅಹೋರಾತ್ರಿ  ಭಜನೆ ,ಪೂಜೆ ಮುಂತಾದ  ಧಾರ್ಮಿಕ  ವಿಧಾನಗಳಿಂದ  ಪೂಜಿಸಿ ,ಭಾರೀ  ಭಕ್ತ ಸಮೂಹದೊಂದಿಗೆ ಭಾರವಾದ ಹೃದಯ ದೊಂದಿಗೆ ತಾತ ನವರ  ಸಮಾಧಿ  ಮಾಡಲಾಯಿತು ,ಕೆಲಕಾಲದ  ನಂತರ  ಆ ಸಮಾಧಿಯ  ಮೇಲೆ  ಭವ್ಯವಾದ  ಗದ್ದುಗೆಯನ್ನು  ನಿರ್ಮಸಿ  ,ಬರುವ ಭಕ್ತರಿಗೆ  ತಾತನವರ  ಗದ್ದುಗೆಯ ದರ್ಶಿಸಲು  ಅನುಕೂಲ ಮಾಡಿಕೊಡಲಾಯಿತು .ಹಾಗೆ ,ಅದೊಂದುದಿನ  ಭಕ್ತ ಬಳಗವೆಲ್ಲ  ಸೇರಿ ,ಆ ಸ್ಥಳದಲ್ಲಿ  " ಶ್ರೀ ಯಾರ್ರಿತಾತನವರ ಸಮಾಧಿ ಸ್ಥಳ " ಎಂದು  ಫಲಕವನ್ನು  ಬರೆಸಲು  ತೀರ್ಮಾನಿಸಿದಾಗ ,ಆ ಸಮಾಧಿ  ಸ್ಥಳದಿಂದ  ಏನೋ  ಶಬ್ದ ಬಂದಂತಾಗಿ  ಎಲ್ಲರೂ  ಅಲ್ಲಿಗೆ ಹೋದಾಗ ಆಗ ನಡಿಯಿತು ಒ...

ಹಂಪೆ ಚಕ್ರತೀರ್ಥ

ಕಾಲ : ೧೫ನೇ  ಶತಮಾನ    ಸ್ಥಳ   :  ವಿಜಯನಗರ  ಸಾಮ್ರಾಜ್ಯದ  ರಾಜಧಾನಿ   ಹಂಪೆ  ಚಕ್ರತೀರ್ಥದ  ಹತ್ತಿರದ  ಯಂತ್ರೋ ಧಾರಕ  ಆಂಜನೇಯ  ದೇವರ  ಸನ್ನಿಧಾನ .   ಸಮಯ : ಪ್ರಾಥಹ ಕಾಲ .  ಶ್ರೀ ವ್ಯಾಸರಾಜರು , ಪುರಂಧರದಾಸರು ,ಕನಕದಾಸರು ಕೂಡಿದ  ಸಮಯ ಆಗವ್ಯಾಸರಾಜರು ,ಕನಕದಾಸರನ್ನು  ಉದ್ದೇಶಿಸಿ ,ಕನಕಾ ,ಪ್ರಾಣದೇವರ ಪೂಜೆಗೆ  ಹೂಗಳನ್ನು  ಕೊಯ್ದು ತಾ ,ಎಂದು ಆದೇಶಿಸಿದಾಗ ಕನಕದಾಸರು  ಅಲ್ಲಿಂದ ಹೊರಟು  ತುಂಗಾ ತೀರದ ದಡದಲ್ಲಿ  ಹೂಗಳನ್ನು  ಆಯ್ದು ತಂದು  ಗುರುಗಳ  ಮುಂದೆ ಇಟ್ಟು  ಕುಳಿತರು .ಕ್ಷಣಕಾಲ  ಹೂಗಳನ್ನು  ದಿಟ್ಟಿಸಿದ  ವ್ಯಾಸರಾಜರು  ,ಈ ಹೂಗಳು ಆಗಲೇ  ಬೇರೆ ದೇವರಿಗೆ  ಅರ್ಪಿತವಾಗಿವೆ  ಹಾಗಾಗಿ  ಬೇರೆ ಹೂಗಳನ್ನು  ತೆಗೆದುಕೊಂಡು  ಬಾ ಎಂದು ಹೇಳಿದರು ,ಆಗ ಮರುಮಾತಾಡದೆ  ಕನಕದಾಸರು  ಮತ್ತೆ ಹೊರಟು  ಬೇರೆ ಹೂಗಳನ್ನು  ತಂದು  ಗುರುಗಳ ಮುಂದೆ  ಇರಿಸಿದರು .ಆಗ ,ಮತ್ತೇ ಹೂಗಳನ್ನು  ದಿಟ್ಟಿಸಿ ದ ವ್ಯಾಸರಾಯರು  ಇವು  ಕೂಡ  ಬೇರೇ ದೇವರಿಗೆ  ಅರ್ಪಿ ಸಲ್ಪಟ್ಟಿವೆ  ಎಂದರು . ಈ ಮಾತು ಕೇಳಿ  ಕನಕದಾಸರು  ಚ...

ದಮ್ಮೂರು ವೆಂಕಪ್ಪತಾತ

  ಬಳ್ಳಾರಿ ಜಿಲ್ಲೆ  ವಿಶೇಷವಾಗಿ  ಬಳ್ಳಾರಿ ತಾಲೂಕು  ಅನೇಕ  ಶರಣರ ,ಅವಧೂತರ  ನೆಲೆವೀಡು ,ದಮ್ಮೂರು  ವೆಂಕಾವಧೂತರು .ಚೇಳ್ಳಗುರ್ಕಿ ಯರಿತಾತ ,ಅಲ್ಲೀಪುರ  ಮಹದೇವತಾತ .ಎಮ್ಮಿಗನೂರು ಜೆಡಿತಾತ .ಸಿಂಧಿಗೇರಿ  ಮಲ್ಲಪ್ಪತಾತ .ಕುರುಗೋಡು ನೀಲಮ್ಮ ಹೀಗೆ ಹಲವಾರು ..." ದಮ್ಮೂರು " ಬಳ್ಳಾರಿ ಸಿರುಗುಪ್ಪ  ಹೆದ್ದಾರಿ  ಕುರುಗೋಡು  ಕ್ರಾಸ್  ಹತ್ತಿರದ  ಚಿಕ್ಕ ಗ್ರಾಮ .ಈ ಊರಿನ  ಹತ್ತಿರದ  ಚಿಕ್ಕ ಗುಡ್ಡದ ಪ್ರದೇಶ ದಲ್ಲಿ ವೆಂಕಪ್ಪತಾತರ ಮಠ ಇದೆ .( ಸಮಾಧಿ ಸ್ಥಳ  ) ಸ್ವತಃ ತಾತನವರೇ  ಗುಹೆ ಯೊಂದನ್ನು ಗುರುತಿಸಿ ,ತಾನೆನಿಂತು ಕಟ್ಟಿಸಿ  ಇಲ್ಲಿಯೇ ನನ್ನ ಸಮಾಧಿ ಮಾಡಿರಿಯೆಂದು ತನ್ನ ಭಕ್ತರಿಗೆ ತಿಳಿಸಿ ,ಸುತ್ತ ಮುತ್ತ ಊರುಗಳಲ್ಲಿ ಸಂಚರಿಸಿ ಜನರಿಂದ  ಹಣವನ್ನು ಸಂಗ್ರಹಿಸಿ  ಮಠ ನಿರ್ಮಿಸಿರುತ್ತಾರೆ .ಹಾಗೆ ,ಕುರುಗೋಡಿಗೂ ಬಂದಿದ್ದರು .ನಮ್ಮ ತಾತ ಅವ್ವ ಬಹುಶ  ಅಯ್ಯನೂ  ನೋಡಿರುತ್ತಾರೆ .೧೯೪೦ರ  ಸಮಯ .ಬ್ರಿಟಿಷ ರ  ಆಳ್ವಿಕೆ .ಬಳ್ಳಾರಿ ,ಮದ್ರಾಸ್  ಪ್ರಾಂತಕ್ಕೆ  ಸೇರಿತ್ತು .    ಆ ಸಮಯದಲ್ಲಿ  ಮೂರುವರ್ಷಗಳಿಂದ  ಭೀಕರ ಬರಗಾಲ ,ಜನಕಂಗೆಟ್ಟಿದ್ದರು .ಅಂಥಾ ಸಮಯದ ಲ್ಲಿ " ಯುಗಾದಿ ಹಬ್ಬ " ಬಂದಿರುತ್ತದೆ ಕಯ್ಯಲ್ಲಿ  ದುಡ್ಡಿಲ್ಲದ ಜನ ಹಬ್ಬವ...